ಸ್ನೇಹಿತರೆ ಗಣಪತಿ ಹಬ್ಬ ಅಂತ ಅಂದರೆ ಪಟ್ ಅಂತ ನಮಗೆ ಅಥವಾ ಈಗಿನ ಯುವಪೀಳಿಗೆಗಳಿಗೆ ಅರ್ಥ ಆಗೋದು DJ ಮೋಜು ಮಸ್ತಿ ಪಟಾಕಿ ಸಿಡಿಸೋದು ಅಥವಾ ಕುಣಿದು ಕುಪ್ಪಳಿಸೋದು ಎಲ್ಲೆಲ್ಲೂ ಹಬ್ಬದ ವಾತಾವರಣ ಹಾಗೂ ಇನ್ನೂ ಹಲವಾರು ವಿಚಾರಗಳು ನಮ್ಮ ಕಣ್ಣಮುಂದೆ ಬರುತ್ತಾ ಹೋಗುತ್ತವೆ ಆದ್ರೆ ಇದರ ನಿಜ ಇತಿಹಾಸ ತಿಳಿದ್ರೆ ನೀವು ಕೂಡ ಒಮ್ಮೆ ಬೆಚ್ಚಿ ಬೀಳ್ತಿರಾ.
ಗಣೇಶ್ ಚತುರ್ಥಿಯ ಆಚರಣೆ ಪ್ರಾಚೀನ ಕಾಲದಿಂದಲೂ ನಡೆಯುತ್ತಾ ಬಂದಿದ್ದು ಅದರದೇ ಆದ ವಿಶಿಷ್ಟ ಇತಿಹಾಸವನ್ನ ಹೊಂದಿದೆ, ಆದರೆ ಈ ಉತ್ಸವವನ್ನ ಸಾರ್ವಜನಿಕವಾಗಿ ಆಚರಿಸಲು ಕರೆ ಕೊಟ್ಟಿದ್ದೆ ಲೋಕಮಾನ್ಯ ಬಾಲ ಗಂಗಾಧರ್ ತಿಲಕರು 1893ರಲ್ಲಿ ಭಾರತೀಯರಲ್ಲಿ ಹಾಗೂ ವಿಶೇಷವಾಗಿ ಹಿಂದೂ ಸಮಾಜವನ್ನ ಬ್ರಿಟಿಷರ ವಿರುದ್ಧ ಸ್ವತಂತ್ರದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಭಾರತೀಯರನ್ನು ಒಗ್ಗೂಡಿಸಲು ಈ ಆಚರಣೆಗೆ ಕರೆ ಕೊಟ್ಟರು ಅಂದಿನಿಂದ ಇಂದಿನವರೆಗೆ ಈ ಉತ್ಸವ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಹಬ್ಬವಾಗಿ ಗುರುತಿಸಿಕೊಂಡಿದೆ.
ಅಥಣಿಯ ಸಾರಿ ಬಜಾರ್ ಎಂದೇ ಪ್ರಸಿದ್ಧವಾಗಿರೋ ಈ ಸ್ಥಳ ಬಹಳ ಹಳೆಯ ಇತಿಹಾಸವನ್ನ ಹೊಂದಿದೆ, ನಗರದ ಹೃದಯಭಾಗದಲ್ಲಿ ನೆಲೆಸಿರುವ ಈ ಮಾರುಕಟ್ಟೆಯಲ್ಲಿ ಈ ಮಳಿಗೆಗಳು ಬ್ರಿಟಿಷ ಕಾಲದಿಂದಲು ಇಲ್ಲಿ ಸೀರೆ ಹಾಗೂ ಬಟ್ಟೆ ವ್ಯಾಪಾರವನ್ನ ನಡೆಸುತ್ತಾ ಬಂದಿವೆ.
ಇದೀಗ ಈ ಅಥಣಿಯ ಸಾರಿ ಬಜಾರಿನ “ಶ್ರೀ ಗಜಾನನ ಯುವಕ ಸಂಘದ ಸಾಮೂಹಿಕ ಗಣಪತಿಗೆ” 50ರ ಸಂಭ್ರಮ ಹೌದು 1974ರಲ್ಲಿ ಪ್ರಾರಂಭವಾದ ಸಾರಿ ಬಜಾರಿನ ಗಣಪತಿಯನ್ನ ಮೊದಲು ಪ್ರಾರಂಭ ಮಾಡಿದ್ದು ಕಿಶೋರ್ ಭಾಟೆ, ಗುರು ಉಣ್ಣಿ, ದಿಲೀಪ್ ಭಾಟೆ, ಮುರಗೇಪ್ಪಾ ಮಡಿವಾಳ್, ಮುರಿಗೆಪ್ಪಾ ಬಕಾರಿ ಮತ್ತು ರಾಚಪ್ಪಾ ಗೆಜ್ಜಿ ಮತ್ತೆ 2 ನೇ ಬಾರಿಗೆ 1982ರಲ್ಲಿ ಸಂಘದ ಬೋರ್ಡ್ ಮರುನಿರ್ಮಾಣ ಎಮ್ ಎ ಚುನಮುರಿ, ಮುರಿಗೆಪ್ಪ ತೊದಲಬಾಗಿ ನಂತರ ಮೂರನೇ ಬಾರಿ ಈ ಕಮೀಟಿ 2007ರಲ್ಲಿ ನಿರ್ಮಾಣ ಗೊಂಡು 2007 ರಿಂದ 21 ಸದಸ್ಯರು ಅಧ್ಯಕ್ಷರಾಗಿ ಮಹೇಶ್ ಚುನಮುರಿ ಕಾರ್ಯದರ್ಶಿಗಳಾಗಿ ವಿಜಯ್ ಮೇಣಶಿ ಹಾಗೂ ಸದಸ್ಯರಾಗಿ ದಿನೇಶ್ ಭಾಟೆ, ಮಹೇಶ್ ಮೇತ್ರಿ, ನರೇಶ್ ಭಾಟೆ, ಶ್ರೀಧರ್ ಶಿಂದಗಿ, ಸತೀಶ್ ಚುನಮುರಿ, ವಿನಯ್ ತೊದಲಬಾಗಿ, ವಿಶ್ವನಾಥ್ ಚುನಮುರಿ, ಶ್ರೀನಿವಾಸ್ ತೊದಲಬಾಗಿ, ಅಮಿತ್ ಗೆಲಾನಿ, ಶ್ರೀಶೈಲ್ ಚುನಮುರಿ, ಮಹೇಶ್ ಉಣ್ಣಿ, ಈಶ್ವರ್ ತೊದಲಬಾಗಿ, ಶಶಿಕುಮಾರ್ ಶಿಂದಗಿ, ಸುರೇಶ ಮೇತ್ರಿ, ವಿಶ್ವನಾಥ್ ತೊದಲಬಾಗಿ, ರಂಗನಾಥ್ ಮೂಲ್ಯ, ಶ್ರೀಧರ್ ಗುಡೋಡಗಿ ಮತ್ತು ರಾಜು ಗುಡೋಡಗಿ ಹೀಗೆ ಕಳೆದ 3 ತಲೆಮಾರಿನಿಂದ ಕುಡಿಸುತ್ತಾ ಬಂದಿರುವ ಈ ಸಂಘ ಈಗ ತನ್ನ 50 ವರ್ಷಗಳ ಸುದೀರ್ಘ ಇತಿಹಾಸವನ್ನ ಪೂರ್ಣಗೊಳಿಸಿದೆ 3 ಪೀಳಿಗೆಗಳು ಕಳೆದು ಹೋದರು ಇವತ್ತಿಗೂ ಅದೇ ಉತ್ಸಾಹ ಮತ್ತು ಸಡಗರದಿಂದ ಗಣೇಶ ಹಬ್ಬವನ್ನ ಆಚರಿಸುತ್ತ ಬಂದಿದ್ದಾರೆ ಹಾಗೂ 50ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿ ಅತ್ಯಂತ ಸುಂದರವಾದ ಅಲಂಕೃತ ವಾತಾವರಣವನ್ನು ಸೃಷ್ಟಿಮಾಡಲಾಗಿದೆ, ಕಂಗೊಳಿಸುತ್ತಿರುವ ದೀಪದ ಕಂಬಗಳು ಮಹಾರಾಜರ ವಾಡೆ ಅಥವಾ ಕೋಟೆ ರೀತಿಯ ವಿನ್ಯಾಸದಲ್ಲಿ ಗಣಪತಿ ಸ್ಟೇಜ್ ಹಾಕಲಾಗಿದೆ ಮತ್ತು ಅದರ ಮುಂದೆ ನೀರಿನ ಕಾರಂಜಿ ಲೈಟಿಂಗ್ ವಿಶೇಷ ಆಕರ್ಷಣೆಯಾಗಿದ್ದು ಅಥಣಿಯ ಭಕ್ತಾದಿಗಳನ್ನ ತನ್ನತ್ತ ಪ್ರವಾಸಿ ತಾಣದಂತೆ ವಿಶೇಷವಾಗಿ ಕೈಬೀಸಿ ಕರೆಯುವಂತೆ ಕಂಗೊಳಿಸುತ್ತಿದೆ.