ರ್ರಾಷ್ಟೀಯ ಮಾನವ ಹಕ್ಕುಗಳ ತನಿಖಾ ಸಮೀತಿ (ರಿ),ಬೆಂಗಳೂರು ಸಂಸ್ಥೆಗೆ ಬೆಳಗಾವಿ ಜಿಲ್ಲಾ ಕಾನೂನು ಸಲಹೆಗಾರರಾಗಿ ಅಥಣಿಯ ಖ್ಯಾತ ವಕೀಲರಾದ ಶ್ರೀ ವಿಷ್ಣು ಜಿ ಕುಲಕರ್ಣಿ ಯವರು ಹಾಗೂ ಜಿಲ್ಲಾ ಅಧ್ಯಕ್ಷರಾಗಿ ಅಥಣಿಯ ಶ್ರೀ ಡಿ ಎಮ್ ಮಕಾನದಾರ್ ಅವರು ಆಯ್ಕೆ ಯಾಗಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಂದ ಸಾಮಾಜಿಕ ತೊಂದರೆಗಳು ಉಂಟಾಗುತ್ತದೆ. ಇದಕ್ಕೆ ಕಾನೂನು ಬದ್ಧವಾಗಿ ಸಾಮಾಜಿಕ ನ್ಯಾಯ ದೊರಕಿಸಿ ಕೊಡಲೆಂದೇ ರಾಷ್ಟೀಯ ಮಾನವ ಹಕ್ಕುಗಳ ತನಿಖಾ ಸಮೀತಿ (ರಿ) ಇದೀಗ ರಾಷ್ಟೀಯ ಮಾನವ ಹಕ್ಕುಗಳ ಪರವಾಗಿ ಧನಿ ಎತ್ತುವ ಮೂಲಕ ಕಾನೂನು ಬದ್ಧವಾಗಿ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವಲ್ಲಿ ಈ ತನಿಖಾ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದಾಗಿ ಅಥಣಿಯ ಖ್ಯಾತ ವಕೀಲರಾದಂತಹ ಶ್ರೀ ವಿಷ್ಣು ಜಿ ಕುಲಕರ್ಣಿ ಅವರು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ರಾವಸಾಬ್ ಐಹೊಳೆ – ಮಾಜಿ ಅಧ್ಯಕ್ಷರು, ಟಿಎಂಸಿ ಅಥಣಿ ಮತ್ತು ಆರ್‌ಎನ್‌ಎ ಲ್ಯಾಂಡ್ ಡೆವಲಪರ್ಸ್ & ಬಿಲ್ಡರ್ಸ್ ಅಥಣಿ ಇದರ ಮಾಲೀಕರು, ಶ್ರೀ ರವಿ ಪುಜಾರಿ – ಆರ್,ಎಸ್,ಪಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಮಾಲೀಕರು. ಅಥಣಿ ಟಿ,ಎಂ,ಸಿ ಗಣ್ಯ ಸದಸ್ಯರುಗಳಾದಂತಹ – ಶ್ರೀ ಮಲ್ಲಿಕಾರ್ಜುನ ಸದಾಶಿವ್ ಬುಟಾಳಿ, ಶ್ರೀ ಬಿರಪ್ಪ ಯಂಕಚ್ಚಿ , ಶ್ರೀ ಬಸವರಾಜ ಹಳ್ಳದಮಳ್, ಶ್ರೀ ರಮೇಶ ಪವಾರ, ಶ್ರೀ ರವಿ ಬಡಕಂಬಿ, (ಸಿಎ) – ಶ್ರೀ ಸಿದ್ಧರೂಢ ಹಿರೇಮಠ, ಶ್ರೀ ಶಿವು ಅಣ್ಣಾ ತೆಲಸಂಗ, ಡಾ. ಮಲ್ಲಿಕಾರ್ಜುನ ತೆಲಸಂಗ , ಶ್ರೀ ಜ್ಯೋತಿಬಾ ಬಾಸಿಂಗಿ, ಶ್ರೀ ಪ್ರಸಾದ್ ಮಂಗಸುಳಿ, ಶ್ರೀ ವಿದ್ಯಾಧರ ಮಡಿವಾಳ – D9 ಸಾಮಾಜಿಕ ಮಾಧ್ಯಮ ಮುಖ್ಯ ಸಂಪಾದಕ, ಶ್ರೀ ಸಾಗರ್ ಮಗದುಮ್ (ಎಂಜಿನಿಯರ್), ಶ್ರೀ ಅನಂತ ಕುಲಕರ್ಣಿ (ಎಂಜಿನಿಯರ್)’, ಶ್ರೀ ಸಂತೋಷ ಕುಲಕರ್ಣಿ – ಸಹ್ಯಾದ್ರಿ ಕಾನ್ಸ್ಟ್ರಕ್ಷನ್ಸ್ ಸಾಂಗ್ಲಿ ಇದರ ಕರ್ನಾಟಕ ರಾಜ್ಯ ಮುಖ್ಯ ಕಾರ್ಯಕಾರಿ ಅಭಿಯಂತರರು, ಇತರ ಗೌರವಾನ್ವಿತ ಗಣ್ಯ ವ್ಯಕ್ತಿಗಳು ಮತ್ತು ಅಥಣಿಯ ಖ್ಯಾತ ಉದ್ಯಮಿಗಳು ಶ್ರೀ ವಿಷ್ಣು ಜಿ ಕುಲಕರ್ಣಿ ಯವರಿಗೆ ಹಾಗೂ ಶ್ರೀ ಎಮ್ ಡಿ ಮಕಾನದಾರ್ ಅವರಿಗೆ ಸನ್ಮಾನಿಸಿದರು ಮತ್ತು ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರವಿ ಪೂಜಾರಿಯವರು ಮತ್ತು ಶ್ರೀ ರಾವಸಾಬ್ ಐಹೊಳೆ ಯವರು ಸಾಮಾಜಿಕ ನ್ಯಾಯ ಕೊಡುವಲ್ಲಿ ಈ ಸಂಸ್ಥೆ ಉನ್ನತ ಮೈಲಿಗಲ್ಲನ್ನು ತಲುಪಲಿ ಎಂದು ಶುಭಕೋರಿದರು.